ಕೇರಳ ಕ್ರಾನಿಕಲ್

1961 ರಿಂದ 1969ರವರೆಗೆ ಕೇರಳದ ತ್ರಿಚೂರಿನಿಂದ ಪ್ರಕಟವಾಗುತ್ತಿದ್ದ ಇಂಗ್ಲಿಷ್ ದಿನಪತ್ರಿಕೆ. ಎಕ್ಸ್‍ಪ್ರೆಸ್ ಎಂಬ ಮಲೆಯಾಳಂ ದಿನಪತ್ರಿಕೆಯ ಪ್ರಕಾಶಕರಿಂದ ಸ್ಥಾಪಿತವಾಗಿತ್ತು. 1965ರವರೆಗೆ ಸಿ.ಎಚ್.ವಿ. ಪತಿ ಮತ್ತು ಅನಂತರ ಕೆ. ಕೃಷ್ಣನ್ ಸಂಪಾದಕರಾಗಿದ್ದರು. ಬಿಡಿಪ್ರತಿಯ ಬೆಲೆ ಏಳು ಪೈಸೆ. ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸುದ್ದಿಗಳನ್ನೂ ವಿಶೇಷ ಲೇಖನಗಳನ್ನೂ ಪ್ರಕಟಿಸುತ್ತಿದ್ದ ಈ ಪತ್ರಿಕೆ ಬದುಕಿದ್ದಷ್ಟು ಕಾಲ ನೇರ ನಿರ್ಭಯ ನೀತಿ ಅನುಸರಿಸುತ್ತಿತ್ತು. ಆರ್ಥಿಕ ಮುಗ್ಗಟ್ಟಿನಿಂದ ಇದು 1969ರಲ್ಲಿ ನಿಂತುಹೋಯಿತು.  						
		(ಎಸ್.ಐ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ